ಸಾವಿರ ಬಡ ಕುಟುಂಬಗಳಿಗೆ ದಿನಸಿ ಪದಾರ್ಥಗಳ ಕಿಟ್ ವಿತರಣೆ - Arun babu news
ಚಿಕ್ಕಬಳ್ಳಾಪುರ: ಬಿಪಿಎಲ್ ಪಡಿತರ ಕಾರ್ಡ್ ಇಲ್ಲದೇ ಇರುವ ಬಡ ಕುಟುಂಬಗಳಿಗೆ ಸಾವಿರ ದಿನಸಿ ಪದಾರ್ಥಗಳ ಕಿಟ್ ಅನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಡಾ.ಅರುಣ್ ಬಾಬು ವಿತರಣೆ ಮಾಡಿದರು. ಬಟ್ಲಹಳ್ಳಿ ಗ್ರಾಮದ ಹಲವಾರು ಹಳ್ಳಿಗಳಲ್ಲಿ ಬಿಪಿಎಲ್ ಕಾರ್ಡ್ ಇಲ್ಲದ ಬಡ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಿದರು. ಈ ವೇಳೆ, ಜನರು ಸರ್ಕಾರದ ಲಾಕ್ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಮನೆಯ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯ ಸುರಕ್ಷತೆ ಕ್ರಮಗಳನ್ನು ಅನುಸರಿಸಿ ಎಂದು ಹೇಳಿದರು.