ಪ್ರವಾಹ ಸಂತ್ರಸ್ತರಿಗೆ ಅನ್ನಪೂಣೇಶ್ವರಿ ಫೌಂಡೇಶನ್ನಿಂದ 2 ಲಾರಿ ಮೇವು ವಿತರಣೆ - ಪ್ರವಾಹ ಸಂತ್ರಸ್ಥರ ಜಾನುವಾರುಗಳಿಗೆ ಮೇವು
ಚಿಕ್ಕೋಡಿ: ಪ್ರವಾಹ ಭೀತಿ ಹಿನ್ನೆಲೆ ನದಿ ತೀರದ ಜನರನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಿದ್ದು, ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ತಾಲೂಕಿನ ಇಂಗಳಿ ಗ್ರಾಮದ ಸಂತ್ರಸ್ತರಿಗೆ ಎರಡು ಲಾರಿ ಮೇವು ವಿತರಿಸಲಾಯಿತು. ಕೃಷ್ಣಾ ನದಿಯ ಮಹಾ ಪ್ರವಾಹದಿಂದ ತಾಲೂಕಿನ ಇಂಗಳಿ ಗ್ರಾಮ ತತ್ತರಿಸಿ ಹೋಗಿದೆ. ಇಲ್ಲಿಯ ಜನರನ್ನು, ಜಾನುವಾರುಗಳನ್ನು ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾದ ಹಿನ್ನೆಲೆ ಶಾಸಕ ಗಣೇಶ ಹುಕ್ಕೇರಿ, ಮಾಜಿ ಸಂಸದರಾದ ಪ್ರಕಾಶ ಹುಕ್ಕೇರಿಯವರು ತಮ್ಮ ಸ್ವಂತ ಖರ್ಚಿನ ಮೂಲಕ ಅನ್ನಪೂಣೇಶ್ವರಿ ಫೌಂಡೇಶನಿಂದ 2 ಲಾರಿಯಷ್ಟು ಮೇವುನ್ನು ವಿತರಿಸಿದ್ದಾರೆ.