ದಿನಕ್ಕೆ 2 ಲಕ್ಷ ಆಹಾರ ಪೊಟ್ಟಣ, ಒಂದು ಲಕ್ಷಕ್ಕೂ ಅಧಿಕ ದಿನಸಿ ಕಿಟ್ ವಿತರಣೆ: ಇದನ್ನೆಲ್ಲ ಸರ್ಕಾರ ಹೇಗೆ ತಲುಪಿಸುತ್ತಿದೆ ಗೊತ್ತಾ? - ಬೆಂಗಳೂರಲ್ಲಿ ಆಹಾರ ಪೊಟ್ಟಣ ವಿತರಣೆ
ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ಹೆಮ್ಮಾರಿ ಅಟ್ಟಹಾಸದಿಂದ ಕಾರ್ಮಿಕ ವರ್ಗ ಬರ್ಬಾದ್ ಆಗಿದೆ. ದಿನಗೂಲಿ ನಂಬಿ ಬದುಕು ಕಟ್ಟಿಕೊಂಡಿದ್ದ ಕೋಟ್ಯಂತರ ಜನರು ಹಸಿವಿನಿಂದ ಬಳಲುತ್ತಿದ್ದು, ಅವರಿಗಾಗಿ ಸರ್ಕಾರ ಬೆಂಗಳೂರಿನಲ್ಲಿ ಹಲವು ಸಂಘ, ಸಂಸ್ಥೆಗಳ ನೆರವಿನಿಂದ ದಿನಕ್ಕೆ 2 ಲಕ್ಷ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಅರಮನೆ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕರ್ನಾಟಕ ನಾಗರಿಕ ರಕ್ಷಣಾ ತಂಡದ ಸಹಾಯದಿಂದ ಸಿವಿಲ್ ಡಿಫೆನ್ಸ್ ಕಾರ್ಯಪಡೆ ಯುದ್ಧೋಪಾದಿಯಲ್ಲಿ ವಿತರಣೆ ಕಾರ್ಯಕ್ಕೆ ಮುಂದಾಗಿದೆ ಎಂದು ಡಿಫೆನ್ಸ್ ಕಮಾಂಡರ್ ಚೇತನ್ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ. ಇನ್ನು ಆಹಾರಕ್ಕಾಗಿ ಏನು ಮಾಡಬೇಕು ಎಂಬುದರ ವಿವರ ಈ ವಿಡಿಯೋದಲ್ಲಿದೆ ನೋಡಿ.