ಡಿಸ್ನಿಲ್ಯಾಂಡ್ ಮತ್ತು ರೋಪ್ ವೇ ಮಾಡಲು ಬಿಡುವುದಿಲ್ಲ: ಪ್ರೊ. ರಂಗರಾಜು
ಮೈಸೂರು: ಕೆಆರ್ಎಸ್ನಲ್ಲಿ ಡಿಸ್ನಿಲ್ಯಾಂಡ್ ಹಾಗೂ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಮಾಡಲು ಬಿಡುವುದಿಲ್ಲ ಎಂದು ಪಾರಂಪರಿಕ ತಜ್ಞ ಪ್ರೊ. ರಂಗರಾಜು ಹೇಳಿದರು. ಈಟಿವಿ ಭಾತರದೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಖಾಸಗಿ ಸಹಭಾಗಿತ್ವದಲ್ಲಿ ಕೆಆರ್ಎಸ್ ಹಿಂಭಾಗದಲ್ಲಿ ಡಿಸ್ನಿಲ್ಯಾಂಡ್ ಹಾಗೂ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಮಾಡಲು ತಯಾರಿ ನಡೆಸಿದ್ದು, ಇದು ಅಗತ್ಯವಿಲ್ಲ. ಕೆಆರ್ಎಸ್ ಡ್ಯಾಂ ಪಕ್ಕದಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ಮಾಡಿದರೆ ಡ್ಯಾಮ್ಗೆ ಅಪಾಯವಾಗುವ ಸಂಭವವಿದೆ. ಹಾಗೇ ಚಾಮುಂಡಿ ಬೆಟ್ಟದಲ್ಲಿ ಅಪಾರ ಅರಣ್ಯ ಸಂಪತ್ತು ಹಾಗೂ ಪ್ರಾಣಿ ಸಂಕುಲವಿದೆ. ಇಲ್ಲಿ ರೋಪ್ ವೇ ನಿರ್ಮಾಣ ಮಾಡಿದರೆ ಇವುಗಳಿಗೆ ಅಪಾಯ ಉಂಟಾಗಲಿದೆ. ಜತೆಗೆ ಚಾಮುಂಡಿ ಬೆಟ್ಟಕ್ಕೆ 5 ರಸ್ತೆಗಳಿದ್ದು, ಯಾವುದೇ ಟ್ರಾಫಿಕ್ ಜಾಮ್ ಉಂಟಾಗುವುದಿಲ್ಲ. ಹಾಗಿದ್ದರೂ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಯಾಕೆ ಬೇಕು ಎಂದು ರಂಗರಾಜು ಸರ್ಕಾರವನ್ನು ಪ್ರಶ್ನಿಸಿದ್ದಾರೆ.