ಕಾರ್ಮಿಕರು, ನಿರ್ಗತಿಕರಿಗೆ ಪಡಿತರ ವಿತರಿಸಿದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ - ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ
ಬೆಂಗಳೂರು: ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ ಪಡಿತರ, ತರಕಾರಿಯನ್ನು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರು ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ಸರ್ಕಾರದಿಂದ ನೀಡಲಾಗುವ ಹಾಲು ವಿತರಣೆ ಮಾಡುವಲ್ಲಿ ಕೆಲ ತಾರತಮ್ಯ ಕಂಡುಬರುತ್ತಿದೆ. ಹಾಲು ವಿತರಣೆ ಸೇರಿದಂತೆ ಎಲ್ಲ ವಿಷಯಗಳಲ್ಲೂ ಕೆ.ಆರ್.ಪುರ ಕ್ಷೇತ್ರದಲ್ಲಿ ಗೊಂದಲವಿದೆ. ಏನೇ ಸಮಸ್ಯೆಯಿದ್ದರೂ ನಮ್ಮ ಶಾಸಕರು, ನಮ್ಮ ಸರ್ಕಾರವೇ ಅಧಿಕಾರಿದಲ್ಲಿದೆ. ಇದು ನಮ್ಮ ಮನೆ. ನಾವು ಬಗೆಹರಿಸಿಕೊಂಡು ಹೋಗುತ್ತೇವೆ ಎಂದರು.