ನೆಚ್ಚಿನ ಕುಮಾರಣ್ಣನನ್ನು ನೋಡಲು ವಿಕಲಚೇತನ ಯುವತಿ ಹುಡುಕಾಟ: ಮನಕಲಕುವಂತಿದೆ ದೃಶ್ಯ! - ಲು ವಿಕಲಚೇತನ ಯುವತಿ ಹುಡುಕಾಟ
ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯದ ಶ್ರೀರಂಗಪಟ್ಟಣ ಕ್ಷೇತ್ರದ ಹಲವು ಗ್ರಾಮಗಳ ಪ್ರವಾಸ ತೆರಳಿದ್ದರು. ಈ ವಿಚಾರ ತಿಳಿದ ಯಾಚೇನಹಳ್ಳಿ ಗ್ರಾಮದ ವಿಕಲಚೇತನ ಯುವತಿಯೊಬ್ಬಳು, ತನ್ನ ನೆಚ್ಚಿನ ನಾಯಕ ಕುಮಾರಸ್ವಾಮಿ ಅವರನ್ನ ನೋಡಲು ಗ್ರಾಮದ ಹೊರವಲಯದ ಸುಲ್ತಾನ್ ರೋಡಿನಲ್ಲಿ ಕಾದು ನಿಂತಿದ್ದಳು. ಕಾರುಗಳು ಬರುತ್ತಿದ್ದಂತೆ ಯುವತಿ, ಯಾವ ಕಾರಿನಲ್ಲಿ ಕುಮಾರಸ್ವಾಮಿ ಇದ್ದಾರೆ ಅಂತ ಗೊತ್ತಾಗದೇ ಆತಂಕದಿಂದ ಕಾರುಗಳ ಕಿಟಕಿ ಹುಡುಕಾಡುತ್ತಿದ್ದ ದೃಶ್ಯ ಎಲ್ಲರ ಮನಕಲಕುವಂತಿತ್ತು.