ನಿಷ್ಕರ್ಷ ಸಿನಿಮಾದ ರೋಚಕ ಕತೆಗಳೇನು ಗೊತ್ತಾ..? ಎಳೆ ಎಳೆಯಾಗಿ ಬಿಚ್ಚಿಟ್ರು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ... - ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ
1993 ರಲ್ಲಿ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ನಿರ್ದೇಶಿಸಿದ ಸೂಪರ್ ಹಿಟ್ ಸಿನಿಮಾ ನಿಷ್ಕರ್ಷ. 'ಸಂಘರ್ಷ 'ಸಿನಿಮಾ ಸೋಲಿನ ಬಳಿಕ ಕೆಲಸವಿಲ್ಲದೆ ಅಲೆದಾಡುತ್ತಿದ್ದಾಗ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿಗೆ ಹೊಳೆದಿದ್ದೇ ನಿಷ್ಕರ್ಷದ ಐಡಿಯಾ? ಸಿನಿಮಾದ ಕತೆ ಶುರುವಾಗಿದ್ದು ಯಾವಾಗ? ಈ ಚಿತ್ರದಲ್ಲಿ ವೈಟ್ ಕಲರ್ ಕಳ ನಟನಾಗಿ ಮಿಂಚಿದ್ದ ಬಿಸಿ ಪಾಟೀಲ್ ಈ ಸಿನಿಮಾಕ್ಕೆ ವಿಲನ್ ಆಗೋದಕ್ಕೆ ಸುನೀಲ್ ಕುಮಾರ್ ದೇಸಾಯಿ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದೇಕೆ?. ಹೀಗೆ ಸಿನಿಮಾದ ಹಲವು ರೋಚಕ ಕತೆಗಳನ್ನು ಬಿಚ್ಚಿಟ್ಟಿದ್ದಾರೆ ದೇಸಾಯಿ.