ರಾಜ್ಯ ಬಿಜೆಪಿ ಅರೆಜೀವ ಸರ್ಕಾರ: ದಿನೇಶ್ ಗುಂಡೂರಾವ್ ಆಕ್ರೋಶ - ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ ದಿನೇಶ್ ಗುಂಡೂರಾವ್
ಮೈಸೂರು: ಸಂಪುಟ ವಿಸ್ತರಣೆ ಮಾಡದೆ ರಾಜ್ಯ ಬಿಜೆಪಿ ಅರೆಜೀವವಿರುವ ಸರ್ಕಾರವಾಗಿದೆ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಕಿಡಿ ಕಾರಿದ್ದಾರೆ. ಸುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಂಪುಟ ವಿಸ್ತರಣೆ ಮಾಡಲು ಹೆಣಗಾಡುತ್ತಿದೆ. ಒಬ್ಬ ವ್ಯಕ್ತಿ ಎಷ್ಟು ಖಾತೆಗಳನ್ನು ನಿಭಾಯಿಸಲು ಸಾಧ್ಯವಿದೆ? ಸಚಿವ ಸಂಪುಟ ವಿಸ್ತರಣೆ ಮಾಡಿ, ವಿಧಾನಸಭೆ ಕಲಾಪ ಚರ್ಚೆಗಳಿಗೆ ಅವಕಾಶ ಮಾಡಿಕೊಡಬೇಕು ಎಂದರು.