ಗೋವಾ, ಮಹಾರಾಷ್ಟ್ರ, ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳೇ ಇವೆ: ಮಹದಾಯಿ ಸಮಸ್ಯೆ ಇತ್ಯರ್ಥ ಮಾಡಲಿ: ಗುಂಡೂರಾವ್ ಸಲಹೆ - ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್
ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಹೋರಾಟ ನಡೆಸುತ್ತಿರುವ ಮಹಾದಾಯಿ ಹೋರಾಟಗಾರರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ರೈತರ ಜೊತೆ ಕುಳಿತು ಧರಣಿಯಲ್ಲಿ ಭಾಗಿಯಾದರು. ಬಳಿಕ ಮಾತನಾಡಿದ ಅವರು, ಮಹಾದಾಯಿ ಯೋಜನೆಯಿಂದ ಕುಡಿವ ನೀರು ಕೊಡುವುದಕ್ಕೆ ಸರ್ಕಾರ ಕೂಡಲೇ ಹಣಕಾಸಿನ ನೆರವು ನೀಡಬೇಕು. ಇನ್ನೂ ಹೆಚ್ಚಿನ ನೀರು ಬಿಡುಗಡೆ ಮಾಡಲು ಸರ್ಕಾರ ಪ್ರಯತ್ನಿಸಬೇಕು. ಗೋವಾ, ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಬಿಜೆಪಿಯ ಸರ್ಕಾರವೇ ಇದೆ. ರೈತರಿಗೆ ಮಹಾದಾಯಿ ನೀರು ಕೊಡಿಸಲು ಇದೇ ಉತ್ತಮ ಸಮಯ ಎಂದರು.