ಮನೆಯಲ್ಲೇ ಸ್ವಾತಂತ್ರ್ಯ ದಿನಾಚರಣೆ: ಧ್ವಜಸ್ತಂಭವಾದ ಬಾಲಕಿ, ಮಕ್ಕಳಿಂದ ಮೊಳಗಿದ ರಾಷ್ಟ್ರಗೀತೆ - ಬಂಟ್ವಾಳ ಮಕ್ಕಳ ಸ್ವಾತಂತ್ರ್ಯೋತ್ಸವ ಸುದ್ದಿ
ಕೊರೊನಾ ಕಂಟಕ ಸ್ವಾತಂತ್ರ್ಯೋತ್ಸವ ದಿನಾಚರಣೆಗೂ ತಟ್ಟಿತಾ? ಈ ವಿಷಮ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸುವುದಾದರೂ ಹೇಗೆ? ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಉಕ್ಕುಡ ಎಂಬ ಮನೆಯೊಂದರಲ್ಲೇ ಇಂದು ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂಭ್ರಮ ಹೇಗಿತ್ತು ಎಂಬುವುದನ್ನು ನಿಜಕ್ಕೂ ನೆನಪಿಡಬೇಕು. ಉಕ್ಕುಡ ದರ್ಬೆಯ ಡಿ.ಎಂ. ರಶೀದ್ ಅವರ ಮನೆಯ ಅಂಗಳದಲ್ಲಿ ಧ್ವಜ ಹಿಡಿದು ಬಂದ ಹುಡುಗಿಯೊಬ್ಬಳು ಸ್ತಂಭವಾದರೆ, ಅಲ್ಲಿಯೇ ಹತ್ತಿರದ ವ್ಯಾಪಾರಿ ನವಾಝ್ ಎಂಬಾತ ಕಾರ್ಯಕ್ರಮದ ಮುಖ್ಯ ಅತಿಥಿಯಾದರು. ಪುಟ್ಟ ಪುಟ್ಟ ಮಕ್ಕಳು ಈ ವೇಳೆ ಧ್ವಜವಂದನೆ ಮಾಡಿ ರಾಷ್ಟ್ರಗೀತೆ ಹಾಡಿದ್ದು ಮನತಟ್ಟುವಂತಿತ್ತು. ಈ ವೇಳೆ ದೇಶಾಭಿಮಾನದ ಕುರಿತು ಮಕ್ಕಳಲ್ಲಿ ತಿಳಿ ಹೇಳಲಾಯಿತು. ಒಂದು ರೀತಿ ಚಿಕ್ಕದಾಗಿದ್ದರು ಸ್ವಾತಂತ್ರ್ಯ ಸಂಭ್ರಮ ಚೊಕ್ಕದಾಗಿತ್ತು.
Last Updated : Aug 16, 2020, 12:17 AM IST