ರೈತರ ಹಿತಕ್ಕಾಗಿ ಧಾತ್ರಿ ಹೋಮ ; ದೇವರಿಗೆ ವಿಶೇಷ ಪೂಜೆ - ಕೊಂಕಣೇಶ್ವರ ದೇವಸ್ಥಾನದಲ್ಲಿ ಧಾತ್ರಿ ಹೋಮ
ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಕೊಂಕಣೇಶ್ವರ ದೇವಸ್ಥಾನದಲ್ಲಿ ಧಾತ್ರಿ ಹೋಮ ಮಾಡಲಾಯಿತು. ಹೋಮದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಹೋಮದ ಹಿನ್ನೆಲೆಯಲ್ಲಿ ಲಕ್ಷ್ಮಿ ನಾರಾಯಣಸ್ವಾಮಿ, ಕೊಂಕಣೇಶ್ವರನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.