ಕರ್ನಾಟಕ

karnataka

ETV Bharat / videos

ವಿಜಯದಶಮಿ ನಿಮಿತ್ತ ಧಾರವಾಡದಲ್ಲಿ ಮೈಸೂರು ದಸರಾ ಮಾದರಿಯಲ್ಲಿ ಜಂಬೂ ಸವಾರಿ! - ಧಾರವಾಡದ ದಸರಾ ಜಂಬೂ ಸವಾರಿ

By

Published : Oct 7, 2019, 6:20 PM IST

Updated : Oct 7, 2019, 9:04 PM IST

ನಾಡ ಹಬ್ಬ ದಸರಾ ಪ್ರಯುಕ್ತ ಮೈಸೂರು ದಸರಾ ಮಾದರಿಯಲ್ಲಿ ಧಾರವಾಡದ ಜಂಬೂ ಸವಾರಿ ಉತ್ಸವ ಸಮಿತಿ ವತಿಯಿಂದ ಬೃಹತ್ ಜಂಬೂ ಸವಾರಿ ಮೆರವಣಿಗೆ ನಡೆಯಿತು. ಜಿಲ್ಲೆಯ ಗಾಂಧಿ ನಗರದ ಈಶ್ವರ ದೇವಸ್ಥಾನದಿಂದ ಆರಂಭವಾದ ಜಂಬೂ ಸವಾರಿ ನಗರದ ಪ್ರಮುಖ‌ ಬೀದಿಗಳಲ್ಲಿ ಸಂಚರಿಸಿ ಕಲಾಭವನಕ್ಕೆ ಬಂದು ಕೊನೆಗೊಂಡಿತು. ಇನ್ನು ಮೆರವಣಿಗೆ ಆರಂಭಕ್ಕೂ ಮೊದಲು ವೇದಿಕೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಲವಾರು ಜನ ಸ್ವಾಮೀಜಿಗಳು, ಮಠಾಧೀಶರು ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗವಹಿಸಿ ಜಂಬೂ ಸವಾರಿ ಮೆರವಣಿಗೆಗೆ ಪುಷ್ಪ ಎರಚುವ ಮೂಲಕ ಚಾಲನೆ ನೀಡಿದರು. ಇನ್ನು ಮೆರವಣಿಗೆಯಲ್ಲಿ ‌ಗಜಪಡೆ, ಕುಂಭಮೇಳ, ಹೆಜ್ಜೆ ಮೇಳ, ಕೋಲಾಟ, ಕಾಲು ಕುಣಿತ ಆಟ, ಕರಡಿ ಮಜಲು ಸೇರಿದಂತೆ ಜಾನಪದ ಶೈಲಿಯ ನೃತ್ಯಗಳು ಗಮನ ಸೆಳೆದವು.
Last Updated : Oct 7, 2019, 9:04 PM IST

ABOUT THE AUTHOR

...view details