ಇನ್ನಾದರೂ ಇಸ್ಪೀಟ್ ಆಡುವುದನ್ನು ಬಿಡಿ; ಯುವಕರಿಗೆ ಧಾರವಾಡ ಎಸ್ಪಿ ಎಚ್ಚರಿಕೆ - ಇಸ್ಪೀಟ್ ಆಟಗಾರರ ಬಂಧನ
ಹುಬ್ಬಳ್ಳಿ: ಲಾಕ್ಡೌನ್ ದುರ್ಬಳಕೆ ಮಾಡಿಕೊಂಡು ನಗರದಲ್ಲಿ ಕೆಲ ಯುವಕರು ಇಸ್ಪೀಟು ಆಟ ಆಡುತ್ತಿದ್ದಾರೆ. ಈಗಾಗಲೇ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಕೆಲವು ದಿನಗಳಿಂದ ಇಸ್ಪೀಟು ಅಡ್ಡೆ ಮೇಲೆ ದಾಳಿ ಮಾಡಿ, ಹಲವಾರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರ ಪೊಲೀಸರು ಸಹ ಅಲರ್ಟ್ ಆಗಿದ್ದಾರೆ. ಆದ ಕಾರಣ ಇನ್ನು ಮುಂದೆಯಾದರೂ ಇಂತಹ ಕೆಟ್ಟ ಹವ್ಯಾಸಗಳನ್ನು ಬಿಟ್ಟರೆ ಒಳ್ಳೆಯದು. ಇಲ್ಲವಾದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಧಾರವಾಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್ ಎಚ್ಚರಿಕೆ ನೀಡಿದ್ದಾರೆ.