ಬರ್ತ್‌ಡೇ ಪಾರ್ಟಿ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ : ಎಸ್ಪಿ ಹೀಗಂತಾರೆ.. - ಬರ್ತಡೇ ಪಾರ್ಟಿ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ
ಧಾರವಾಡ: ಬರ್ತ್‌ಡೇ ಪಾರ್ಟಿಯಲ್ಲಿ ರಿವಾಲ್ವರ್ನಿಂದ ಗುಂಡು ಹಾರಿಸಿ ಶುಭ ಕೋರಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 30 ಮತ್ತು ಐಪಿಸಿ 285 ಅಡಿ ಕೇಸ್ ದಾಖಲಿಸಿದ್ದೇವೆ ಎಂದು ಧಾರವಾಡ ಎಸ್ಪಿ ಪಿ ಕೃಷ್ಣಕಾಂತ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ್ತ್‌ಡೇ ಇದ್ದ ವ್ಯಕ್ತಿ ಹಾಗೂ ಫೈರಿಂಗ್ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಓಪನ್ ಫೈರ್ ಮಾಡಿದ ವ್ಯಕ್ತಿ ಬಳಿ 2011ರಿಂದ ರಿವಾಲ್ವರ್ ಲೈಸೆನ್ಸ್ ಇದೆ. ಸದ್ಯ ಲೈಸೆನ್ಸ್ ರದ್ದು ಮಾಡಿದ್ದೇವೆ ಎಂದು ಎಸ್ಪಿ ಸ್ಪಷ್ಟಪಡಿಸಿದರು.