ಕರ್ನಾಟಕ

karnataka

ETV Bharat / videos

ಲಾಕ್​ಡೌನ್​ ಪಾಲಿಸಿ ಅನ್​ಲೈನ್​ನಲ್ಲೇ ಮದುವೆಯಾದ ಜೋಡಿ: ಧಾರವಾಡದಲ್ಲಿ​ ಅಂತ(ರ)ರ್ಜಾಲ​ ವಿವಾಹ - corona virus effect

By

Published : Apr 21, 2020, 12:40 PM IST

ಧಾರವಾಡ: ಕೊರೊನಾ ಕಂಟಕ ವಿಶ್ವದಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಜನ ಗೃಹ ಬಂಧನದಲ್ಲಿದ್ದಾರೆ. ಇತ್ತ ಮದುವೆ ನಿಶ್ಚಯವಾಗಿ ಹಸೆಮಣೆ ಏರಬೇಕಿದ್ದ ಬಹುತೇಕ ಜೋಡಿಗಳು ಮದುವೆ ಮುಂದೂಡಿದ್ದರೆ, ಕೆಲವರು ಸರಳವಾಗಿ ವಿವಾಹವಾಗಿದ್ದಾರೆ. ಆದ್ರೆ ಧಾರವಾಡದಲ್ಲಿ ಡಿಫರೆಂಟ್​ ಮದುವೆ ನಡೆದಿದೆ. ಲಾಕ್​ಡೌನ್​ ಪಾಲಿಸುವುದರೊಂದಿಗೆ ಈ ಜೋಡಿ ಆನ್​ಲೈನ್​ನಲ್ಲಿಯೇ ಸತಿ-ಪತಿ ಆಗಿದ್ದಾರೆ. ಧಾರವಾಡದ ಯುವಕ ಇಮ್ರಾನ್​ -ಕೊಪ್ಪಳ ತಾಜಮಾ ಬೇಗಂ ಎಂಬುವರನ್ನು ವಿಡಿಯೋ ಕಾಲ್​ ಮೂಲಕ ವರಿಸಿದ್ದಾರೆ. ಈ ಇಬ್ಬರ ಅಂತರ್ಜಾಲ ಮದುವೆಗೆ ಹಿರಿಯರು ಸಹ ಅಸ್ತು ಎಂದಿದ್ದು, ಮುಸ್ಲಿಂ ಸಂಪ್ರದಾಯದಂತೆಯೇ ಈ ಕಾರ್ಯ ಜರುಗಿದೆ. ಲಾಕ್​ಡೌನ್​ ಮುಗಿದ ಮೇಲೆ ಸೊಸೆಯನ್ನ ಮನೆ ತುಂಬಿಸಿಕೊಳ್ಳುವುದಾಗಿ ಇಮ್ರಾನ್​ ಕುಟುಂಬಸ್ಥರು ಹೇಳಿದ್ದಾರೆ.

ABOUT THE AUTHOR

...view details