ಸರದಿ ಸಾಲಿನಲ್ಲಿ ನಿಂತು ಧಾರವಾಡ ಜಿಲ್ಲಾಧಿಕಾರಿ ಮತದಾನ - news kannada
ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಇವರ ಪತಿ, ವಾ.ಕ.ರ.ಸಾ.ಸಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು ಧಾರವಾಡದ ಕರ್ನಾಟಕ ಕಾಲೇಜು ಮತಗಟ್ಟೆಯಲ್ಲಿ ಪ್ರತ್ಯೇಕ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಇದಕ್ಕೂ ಮುನ್ನ ಚುನಾವಣಾ ಸಿಬ್ಬಂದಿ ಈ ಇಬ್ಬರು ಅಧಿಕಾರಿಗಳ ಗುರುತಿನ ಚೀಟಿಗಳನ್ನು ಪರಿಶೀಲಿಸಿದರು. ನಂತರ ನೇರವಾಗಿ ಮತಗಟ್ಟೆಗೆ ತೆರಳಿದ ಅವರು, ಸಾಮಾನ್ಯ ಜನರಂತೆಯೇ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಮತ್ತೊಂದೆಡೆ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರು ಗೋಪಾಳ ಆವರಣದ ಮತಗಟ್ಟೆಯಲ್ಲಿ ಪ್ರಥಮ ಮತ ಹಾಕುವ ಮೂಲಕ ವೋಟಿಂಗ್ಗೆ ಚಾಲನೆ ನೀಡಿದ್ರು.
Last Updated : Apr 23, 2019, 2:30 PM IST