ಕರ್ನಾಟಕ

karnataka

ETV Bharat / videos

ಧಾರವಾಡ : ಭಾರೀ ಮಳೆಗೆ ತುಪ್ಪರಿ ಹಳ್ಳದ ತಾತ್ಕಾಲಿಕ ಸೇತುವೆ ಮುಳುಗಡೆ - ಧಾರವಾಡದಲ್ಲಿ ಸೇತುವೆ ಮುಳುಗಡೆ

By

Published : Sep 7, 2020, 2:28 PM IST

ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ತಾಲೂಕಿನ ಹಾರೋಬೆಳವಡಿ ಬಳಿ ತುಪ್ಪರಿ ಹಳ್ಳಕ್ಕೆ ಕಟ್ಟಿದ್ದ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿದೆ. ರಸ್ತೆ ಸಂಚಾರ ಬಂದ್​ ಆಗಿದೆ. ಕಳೆದ ವರ್ಷ ಆಗಸ್ಟ್​​ನಲ್ಲಿ‌ ಸುರಿದ ಮಳೆಗೆ ಸೇತುವೆ ಮತ್ತು ಅಕ್ಕಪಕ್ಕದ ರಸ್ತೆ ಕೊಚ್ಚಿ‌ ಹೋಗಿತ್ತು. ಹಾಳಾದ ಸೇತುವೆ ಹಾಗೂ ರಸ್ತೆ ದುರಸ್ಥಿ ಕಾರ್ಯ ನಡೆಯುತ್ತಿರುವ ಹಿನ್ನೆಲೆ ಪಕ್ಕದಲ್ಲೇ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಭಾನುವಾರ ರಾತ್ರಿ ಸುರಿದ ಮಳೆಗೆ ತಾತ್ಕಾಲಿಕ ಸೇತುವೆ ಮೇಲೆ ನೀರು ಹರಿದು ಹೋಗುತ್ತಿದೆ‌. ಇದರಿಂದ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಧಾರವಾಡ- ಸವದತ್ತಿ ನಡುವಿನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ABOUT THE AUTHOR

...view details