ಹಳ್ಳದ ನೀರಿನ ಬದಲು.. ಶುದ್ಧ ಕುಡಿಯುವ ನೀರು ಬರಲು ಕಾರಣವಾದ ಈಟಿವಿ ಭಾರತ.. - ಕೊಳಚೆ ನೀರನ್ನು ಕುಡಿಯುವ ಹೆಬ್ಬಾಳ ಗ್ರಾಮಸ್ಥರು
ಕಳೆದೊಂದು ವಾರದ ಹಿಂದಷ್ಟೇ ಹಳ್ಳದ ಕೊಳಚೆ ನೀರನ್ನು ಕುಡಿಯುವ ಹೆಬ್ಬಾಳ ಗ್ರಾಮಸ್ಥರು ಎಂದು ಈಟಿವಿ ಭಾರತ ವಿಶೇಷ ವರದಿ ಬಿತ್ತರಿಸಿತ್ತು. ವರದಿ ಬಳಿಕ ಎಚ್ಚೆತ್ತ ಸ್ಥಳೀಯ ಜನಪ್ರತಿನಿಧಿಗಳು, ಸ್ಥಳೀಯ ಅಧಿಕಾರಿಗಳು ಹಳ್ಳದಿಂದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪೈಪಲೈನ್ ಮೂಲಕ ನೀರು ತಂದು ಶುದ್ಧ ನೀರು ನೀಡಲು ಮುಂದಾಗಿದ್ದಾರೆ. ಈ ಕುರಿತ ಒಂದು ಇಂಪ್ಯಾಕ್ಟ್ ಸ್ಟೋರಿ ಇಲ್ಲಿದೆ ನೋಡಿ..