ವೀರಭದ್ರ ಸ್ವಾಮಿ ದೇವರ ದರ್ಶನ ಪಡೆದು ಪುನೀತರಾದ ಭಕ್ತರು - chokkodi veerabhadra
ಚಿಕ್ಕೋಡಿ: ತಾಲೂಕಿನ ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಪ್ರತಿ ವರ್ಷ ವಿಶಾಳಿ ಅಮಾವಾಸ್ಯೆಗೆ ಶ್ರಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಕೊರೊನಾದ ಕರಾಳ ಛಾಯೆ ಮಧ್ಯೆಯೂ ನಿರೀಕ್ಷೆಗಿಂತ ಹೆಚ್ಚಿನ ಭಕ್ತರು ಯಡೂರಿನತ್ತ ಆಗಮಿಸುತ್ತಿದ್ದಾರೆ. ರಾಜ್ಯ ಸರ್ಕಾರ ಜಾತ್ರೆಗಳನ್ನು ನಡೆಸಲು ಅವಕಾಶ ನೀಡಿದ ಬೆನ್ನಲೇ ಭಕ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದೆ.