ಕೊರೊನಾ ಭಯ: ಕೋಟೆನಾಡಲ್ಲಿ ದೇವರ ದರ್ಶನಕ್ಕೆ ಭಕ್ತರ ಹಿಂದೇಟು - ನೀಲಕಂಠೇಶ್ವರ ದೇವಾಲಯ
ಕೋವಿಡ್ ಲಾಕ್‌ಡೌನ್‌ನಲ್ಲಿ ಕೆಲ ಸಡಿಲಿಕೆಗಳ ಮೂಲಕ ದೇವಾಲಯಗಳನ್ನು ತೆರೆಯಲು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ದೇವಸ್ಥಾನಗಳನ್ನು ತೆರೆದು ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಆದ್ರೆ ಚಿತ್ರದುರ್ಗದಲ್ಲಿ ಮಾತ್ರ ದೇವಾಲಯಗಳ ಬಾಗಿಲು ತೆರೆದು 3 ದಿನ ಕಳೆದರೂ ಭಕ್ತರು ಮಾತ್ರ ಕೊರೊನಾ ವೈರಸ್‌ಗೆ ಭಯಬಿದ್ದು ದೇವಸ್ಥಾನಕ್ಕೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ನಗರದಲ್ಲಿರುವ ನೀಲಕಂಠೇಶ್ವರ ದೇವಾಲಯಕ್ಕೆ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ಆಗಮಿಸುತ್ತಿದ್ದು, ದೇವರಿಗೆ ವಿಶೇಷ ಪೂಜೆ ಮಾತ್ರ ನೆರವೇರಿಸಲಾಗುತ್ತಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಸ್ಕ್ರೀನಿಂಗ್ ಮಾಡುತ್ತಿದ್ದರಿಂದ ಜನ್ರು ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ದೇಗುಲದ ಅರ್ಚಕರು.