ಕರ್ನಾಟಕ

karnataka

ETV Bharat / videos

ಗೋಕಾಕ್​​​​ ಅಖಾಡಕ್ಕೆ ದೊಡ್ಡಗೌಡರ ಎಂಟ್ರಿ : ಯಾರಾಗುತ್ತಾರೆ ಗೋಕಾಕ್​ನ 'ಸಾಹುಕಾರ' - ಗೋಕಾಕದಲ್ಲಿ ವೇಣುಗೋಪಾಲ್​ ಮತಯಾಚನೆ

By

Published : Dec 2, 2019, 11:10 PM IST

ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಲು ಕಾರಣರಾದ ಪ್ರಮುಖರಲ್ಲಿ ಬೆಳಗಾವಿ ಸಾಹುಕಾರ್​ ರಮೇಶ್​ ಜಾರಕಿಹೊಳಿ‌ ಕೂಡ ಒಬ್ಬರು. ಇದೇ ಕಾರಣಕ್ಕೆ ರಮೇಶ್​​ ಜಾರಕಿಹೊಳಿಯವರನ್ನ ಮಣಿಸಲು ದಳಪತಿಗಳು ತೊಡೆ ತಟ್ಟಿ ನಿಂತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಎರಡು ದಿನ ಗೋಕಾಕ್​​ನಲ್ಲಿ ಜೆಡಿಎಸ್​ ಅಭ್ಯರ್ಥಿ ಅಶೋಕ ಪೂಜಾರಿ ಪರ ಭರ್ಜರಿ ‌ಪ್ರಚಾರ ನಡೆಸಿದ್ದರು. ಇಂದು ಕುಂದಾನಗರಿಗೆ ಆಗಮಿಸಿದ ಜೆಡಿಎಸ್​ ವರಿಷ್ಠ ದೇವೇಗೌಡ್ರು, ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಪರ‌ ಭರ್ಜರಿ ಮತಪ್ರಚಾರ ನಡೆಸಿದರು.

ABOUT THE AUTHOR

...view details