ಮಂಡ್ಯದಲ್ಲಿ ಕೋಡಿ ಬಿದ್ದ ಕೆರೆಗಳು: ಭತ್ತದ ಜಮೀನಿಗೆ ನುಗ್ಗಿದ ನೀರು - ಭತ್ತದ ನಾಟಿ ನಾಶ
ಮಂಡ್ಯ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಹೊಸ ಬೂದನೂರು, ಕನ್ನಲಿಯ ದೊಡ್ಡ ಕೆರೆಗಳು ಸೇರಿದಂತೆ 10ಕ್ಕೂ ಹೆಚ್ಚು ಕೆರೆಗಳು ಕೋಡಿ ಬಿದ್ದಿವೆ. ಪರಿಣಾಮ ನಾಟಿ ಮಾಡಿದ್ದ ಜಮೀನಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ಭತ್ತ ನಾಶವಾಗಿದ್ದು, ಕೆಲವೆಡೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.