ಮಾರುಕಟ್ಟೆಯಿಲ್ಲದೆ ದ್ರಾಕ್ಷಿ ಬೆಳೆ ನಾಶ.. ಅಳಲು ತೋಡಿಕೊಂಡ ರೈತ.. - ಬಾಗಲಕೋಟೆ ದ್ರಾಕ್ಷಿ ಬೆಳೆ ನಾಶ ಸುದ್ದಿ
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ತುಂಬರಮಟ್ಟಿ ಗ್ರಾಮದ ಭೀಮಪ್ಪ ಹನಮರ ಎಂಬ ರೈತ ಬೆಳೆದಿದ್ದ ದ್ರಾಕ್ಷಿ ಬೆಳೆ ಕಟಾವಿಗೆ ಬಂದಿದೆ. ಮಾರಾಟ ಆಗದೆ ಕೆಳಗೆ ಬಿದ್ದು ಹಾಳಾಗುತ್ತಿದೆ. ಲಾಕ್ಡೌನ್ ಹಿನ್ನೆಲೆ ಮಾರುಕಟ್ಟೆ ಬಂದ್ ಆಗಿದೆ. ಇದರಿಂದ 15 ರಿಂದ 20 ಲಕ್ಷ ರೂಪಾಯಿ ನಷ್ಟವಾಗಲಿದೆ ಎಂದು ರೈತ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.