ಕರ್ನಾಟಕ

karnataka

ETV Bharat / videos

ಭಿಕ್ಷುಕರು, ನಿರ್ಗತಿಕರಿಗೆ ಆಹಾರದ ಪ್ಯಾಕೆಟ್​ ವಿತರಿಸಿದ ಗೋವಿಂದ ಕಾರಜೋಳ - ಕಲಬುರಗಿ ನಿರ್ಗತಿಕರಿಗೆ ಆಹಾರದ ಪ್ಯಾಕೇಟ್​​ ವಿತರಣೆ

By

Published : Mar 29, 2020, 5:02 PM IST

ಕಲಬುರಗಿ: ಕೊರೊನಾ ಭೀತಿ ಹಿನ್ನೆಲೆ ಬಹು ದಿನಗಳ ಬಳಿಕ ಜಿಲ್ಲೆಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ನಗರದ ರೈಲು ನಿಲ್ದಾಣದ ಬಳಿಯಿರುವ ಬಸ್ ನಿಲ್ದಾಣದಲ್ಲಿದ್ದ ಭಿಕ್ಷುಕರು, ನಿರ್ಗತಿಕರಿಗೆ ಆಹಾರದ ಪ್ಯಾಕೆಟ್​​ ವಿತರಿಸುವ ಮೂಲಕ‌ ಮಾನವೀಯತೆ ಮೆರೆದರು. ಈ ವೇಳೆ ಲೋಕಸಭಾ ಸದಸ್ಯ ಡಾ.ಉಮೇಶ್​ ಜಾಧವ್, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಎಂ.ಎಲ್.ಸಿ. ಬಿ.ಜಿ.ಪಾಟೀಲ, ಜಿಲ್ಲಾಧಿಕಾರಿ ಶರತ್‌. ಬಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details