ಕರ್ನಾಟಕ

karnataka

ETV Bharat / videos

ಪೈಗಂಬರ್ ಬಗೆಗಿನ ವಿವಾದಾತ್ಮಕ ಹೇಳಿಕೆ: ಮಧುಗಿರಿ ಮೋದಿ ಬಂಧನಕ್ಕೆ ಆಗ್ರಹ - Controversial statement

By

Published : Feb 21, 2020, 10:27 PM IST

ಇತ್ತೀಚೆಗೆ ಮಹಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವ ಅತುಲ್ ಕುಮಾರ್ ಸಬರ್‍ವಾಲ್ ಅಲಿಯಾಸ್ ಮಧುಗಿರಿ ಮೋದಿಯನ್ನು ಬಂಧಿಸುವಂತೆ ಗೌರಿಬಿದನೂರು ಮುಸ್ಲಿಂ ಸಮುದಾಯದವರು ಶುಕ್ರವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ. ರಾಜಣ್ಣರವರಿಗೆ ಮನವಿ ಪತ್ರಸಲ್ಲಿಸಿದರು. ನಂತರ ಮಾತನಾಡಿದ ಮುಸ್ಲಿಂ ಮುಖಂಡರು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಕೋಮು ಸೌಹಾರ್ದತೆಗೆ ಹೆಸರಾಗಿದೆ. ಸರ್ವ ಜನಾಂಗದವರು ಸಹೋದರರಂತೆ ಇದ್ದೇವೆ. ಶಾಂತಿ ಕದಡಲು ಯತ್ನಿಸುತ್ತಿರುವ ಹಾಗೂ ತಮ್ಮ ಧರ್ಮ ಗುರುವಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ABOUT THE AUTHOR

...view details