ಶಾಶ್ವತ ಸೂರು ಕಲ್ಪಿಸಲು ಆಗ್ರಹಿಸಿ ಕೊಡಗಿನಲ್ಲಿ ಪ್ರತಿಭಟನೆ - ಸರ್ಕಾರದ ವಿರುದ್ಧ ಘೋಷಣೆ
ಕೊಡಗು: ಶಾಶ್ವತ ಸೂರು ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲೆಯ ಕರಡಿಗೋಡು ಹಾಗೂ ಸಿದ್ದಾಪುರ ಗ್ರಾಮದ ನಿರಾಶ್ರಿತರು ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿದರು. ನಮ್ಮ ಭೂಮಿ ನಮ್ಮ ಹಕ್ಕು, ನಿರಾಶ್ರಿತರ ಗೋಳು ಕೇಳುತ್ತಿಲ್ಲವೇ ಎಂದು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.