ನೆರೆ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ - ಸಂತ್ತಸ್ತರಿಗೆ ಕಿಟ್ ವಿತರಣೆ
ಗದಗ ಜಿಲ್ಲೆಯ ನೆರೆ ಸಂತ್ರಸ್ತ ಗ್ರಾಮಗಳ ನಿರಾಶ್ರಿತರಿಗೆ ಇಂದು ಸರ್ಕಾರದ ವತಿಯಿಂದ ಆಹಾರ ಸಾಮಾಗ್ರಿಗಳ ಅಗತ್ಯ ಕಿಟ್ಗಳನ್ನು ಜಿಲ್ಲೆಯ ನರಗುಂದ ತಾಲೂಕಿನ ಬೂದಿಹಾಳ ಹಾಗೂ ಲಕಮಾಪುರ ಗ್ರಾಮಗಳಲ್ಲಿ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ ಸಿ ಪಾಟೀಲ್ ನೆರೆ ಸಂತ್ರಸ್ತರಿಗೆ ಕಿಟ್ ವಿತರಿಸಿ, ಶ್ರೀಘ್ರವೇ ಇನ್ನೂ ಹೆಚ್ಚಿನ ಪ್ರಮಾಣದ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗುವುದೆಂದು ಸಚಿವರು ತಿಳಿಸಿದರು.