ಟಿಪ್ಪು ಪಾಠ ಕೈ ಬಿಡುವ ಸರ್ಕಾರದ ನಡೆ ಖಂಡಿಸಿದ ಮೈಸೂರು ಮೇಯರ್ - Tipu Sultan
ಪಠ್ಯದಿಂದ ಟಿಪ್ಪು ಸುಲ್ತಾನ್ ಪಾಠವನ್ನು ಕೈಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಡೆಯನ್ನು ಮೇಯರ್ ತಸ್ನಿಂ ಖಂಡಿಸಿದ್ದಾರೆ. ಟಿಪ್ಪು ಸುಲ್ತಾನ್ ಐತಿಹಾಸಿಕ ನಾಯಕ. ಮೈಸೂರಿಗಾಗಿ ಕೂಡ ಹೋರಾಟ ಮಾಡಿರುವ ಅವರ ಇತಿಹಾಸವನ್ನು ಮಕ್ಕಳಿಗೆ ತಿಳಿಯುವಂತೆ ಮಾಡಬೇಕು. ನಾನು ಮುಸ್ಲಿಂ ಮಹಿಳೆಯಾಗಿ ಈ ವಿಚಾರವಾಗಿ ಹೇಳುತ್ತಿಲ್ಲ. ಟಿಪ್ಪು ಪಾಠವನ್ನು ಪಠ್ಯದಿಂದ ತೆಗೆಯುವ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.