ನಾಗರಹೊಳೆಯಲ್ಲಿ ಭಾರೀ ಗಾತ್ರದ ಹೆಬ್ಬಾವಿನ ತೆಕ್ಕೆಯಲ್ಲಿ ಜಿಂಕೆ: ಅರಣ್ಯಾಧಿಕಾರಿಗಳು ರಕ್ಷಿಸಿದ್ದು ಹೇಗೆ ನೋಡಿ! - Python -deer story
ಮೈಸೂರು: ಹೆಬ್ಬಾವಿನ ಪಾಲಾಗುತ್ತಿದ್ದ ಜಿಂಕೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ನಡೆದಿದೆ. ಹೆಬ್ಬಾವಿನಿಂದ ಜೀವ ಉಳಿಸಿಕೊಳ್ಳಲು ಜಿಂಕೆ ಪರದಾಡುತ್ತಿತ್ತು. ಇದನ್ನು ಕಂಡ ಅರಣ್ಯ ಇಲಾಖೆಯ ಸಿಬ್ಬಂದಿ ಮರದ ಕೊಂಬೆಯಿಂದ ಹೊಡೆದು ಹೆಬ್ಬಾವಿನಿಂದ ಜಿಂಕೆಯನ್ನು ರಕ್ಷಿಸಿದ್ದಾರೆ.