ಎಲ್ಲಾ ಕಡೆ ದೀಪಾವಳಿ ಸಂಭ್ರಮ... ಈ ಊರಲ್ಲಿ ಮಾತ್ರ ಕರಾಳ ದಿನ! - ದೀಪಾವಳಿ
ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆ ನಿವಾರಿಸಿ ಬೆಳಕನ್ನು ಕೊಡುವ ಹಬ್ಬವೇ ದೀಪಾವಳಿ. ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಹಬ್ಬದ ದಿನ ದೀಪ ಹಚ್ಚಿ ಪಟಾಕಿ ಸಿಡಿಸಿ ಎಲ್ಲರು ಸಂಭ್ರಮ ಪಡುತ್ತಾರೆ. ಆದರೆ ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಮಾತ್ರ ಈ ಹಬ್ಬ ಬಂತಂದ್ರೆ ಕರಾಳ ದಿನ ಬಂದಂತೆ. ಎಲ್ಲರ ಮನೆಯಲ್ಲಿ ಬೆಳಕು ಮೂಡಿದರೆ, ಇಲ್ಲಿ ಮಾತ್ರ ಕತ್ತಲು ಆವರಿಸುತ್ತೆ.