ಮಲೆನಾಡಲ್ಲಿ ಮಹಾ ಮಳೆ: ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ, ಆತಂಕ
ಚಿಕ್ಕಮಗಳೂರು: ಒಂದು ಕಡೆ ಧಾರಾಕಾರ ಮಳೆಯ ಭಯ. ಇನ್ನೊಂದು ಕಡೆ ಕುಸಿಯುತ್ತಿರೋ ಬೆಟ್ಟ - ಗುಡ್ಡಗಳು. ಧರೆಗುರುಳುತ್ತಿರೋ ಬೃಹತ್ ಮರಗಳು. ಮಲೆನಾಡಿನಲ್ಲಿ ಕಳೆದ ಎರಡು ಮೂರು ತಿಂಗಳು ಸುರಿದ ಮಳೆಗೆ ಮಲೆನಾಡಿನ ಆರ್ಥಿಕ ವ್ಯವಸ್ಥೆಯೇ ಅಲ್ಲೋಲ - ಕಲ್ಲೋಲವಾಗಿದೆ. ನಿರಂತರವಾಗಿ ಸುರಿದ ದೈತ್ಯ ಮಳೆಗೆ ಮಲೆನಾಡಿನ ಪ್ರಸಿದ್ದ ತಾಣಗಳಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ. ಮಳೆ ಬಂದರೂ ಕಷ್ಟ. ನಿಂತರೂ ಕಷ್ಟ. ವ್ಯವಹಾರದಲ್ಲಿ ನಷ್ಟ. ಮಲೆನಾಡಿನಲ್ಲಾದ ಪ್ರಕೃತಿ ವಿಕೋಪಕ್ಕೆ ಚಿಕ್ಕಮಗಳೂರಿನ ಅರ್ಥ ವ್ಯವಸ್ಥೆ ಅವ್ಯವಸ್ಥೆಯಾಗುತ್ತಿರುವ ಕುರಿತು ಒಂದು ವರದಿ ಇಲ್ಲಿದೇ ನೋಡಿ.