ನವರಾತ್ರಿ ಸಂಭ್ರಮ... ದುರ್ಗಾದೇವಿಗೆ ಗಾಜಿನ ಬಳೆಗಳಿಂದ ಶೃಂಗಾರ - Dharwad Durga Devi Temple
ಧಾರವಾಡ: ನಗರದ ಹಳೆಯ ಕೋಟೆಯಲ್ಲಿರುವ ಪುರಾಣ ಪ್ರಸಿದ್ಧ ದುರ್ಗಾದೇವಿ ದೇವಸ್ಥಾನದಲ್ಲಿ ನಾಲ್ಕನೇ ದಿನದ ಪೂಜೆಯ ಪ್ರಯುಕ್ತ ಹತ್ತು ಸಾವಿರಕ್ಕೂ ಹೆಚ್ಚು ಬಳೆಗಳಿಂದ ಅಲಂಕಾರ ಮಾಡಲಾಗಿದೆ. ಹಲವು ಬಣ್ಣದ ಗಾಜಿನ ಬಳೆಗಳಿಂದ ದೇವಿ ಶೃಂಗಾರಗೊಳಿಸಲಾಗಿದೆ. ಕೊರೊನಾ ಹಿನ್ನೆಲೆ, ಯಾವುದೇ ಹಬ್ಬ, ಕಾರ್ಯಕ್ರಮಗಳು ನಡೆಯದ ಕಾರಣ ಬಳೆ ವ್ಯಾಪಾರಿಗಳು ಸಂಕಷ್ಟದಲ್ಲಿದ್ದರು. ಆದರೆ, ದೇವಿಗೆ ಸಾವಿರಾರೂ ಬಳೆಗಳನ್ನು ಬಳಸಿ ಅಲಂಕಾರ ಮಾಡುವ ಮೂಲಕ ದೇವಸ್ಥಾನ ಮಂಡಳಿಯವರು ಸಂಕಷ್ಟದಲ್ಲಿರುವ ಬಳೆಗಾರರ ಕೈ ಹಿಡಿಯುವ ಕಾರ್ಯ ಮಾಡಿದ್ದಾರೆ.