ಎಸ್.ಪಿ.ಬಾಲಸುಬ್ರಮಣ್ಯಂ ನಿಧನಕ್ಕೆ ಮಂತ್ರಾಲಯ ಶ್ರೀಗಳಿಂದ ಸಂತಾಪ
ರಾಯಚೂರು: ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಮಣ್ಯಂ ನಿಧನದಿಂದ ದೇಶಕ್ಕೆ, ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಂತ್ರಾಲಯದ ರಾಯರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸಂತಾಪ ಸೂಚಿಸಿದ್ದಾರೆ. ಕನ್ನಡ, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಹಾಡಿ ಸ್ವರ ಸಾಮ್ರಾಟರಾಗಿ, ಗಾನ ಗಂಧರ್ವರಾಗಿದ್ರು. ಅವರು ಇಹಲೋಕ ತ್ಯಜಿಸಿರುವುದು ನೋವು ತಂದಿದೆ. ಎಸ್ಪಿಬಿ ರಾಯರ ಪರಮ ಭಕ್ತರಾಗಿ ಶ್ರೀ ಮಠದೊಂದಿಗೆ ನಿಂಕಟ ಸಂಬಂಧ ಹೊಂದಿದ್ದರು. ರಾಯರ ಹಾಡುಗಳು, ಕಿರ್ತನೆಗಳು, ದಾಸರ ಕಿರ್ತನೆಗಳನ್ನು ಹಾಡಿದ್ರು ಎಂದು ನೆನಪಿಸಿಕೊಂಡಿದ್ದಾರೆ.