ಈಜು ಬಾರದೇ ನದಿಯಲ್ಲಿ ಈಜಲು ಹೋದ ಪಿಯುಸಿ ವಿದ್ಯಾರ್ಥಿ ಸಾವು - ಕುಮದ್ವತಿ ನದಿ
ಶಿವಮೊಗ್ಗ: ಕುಮದ್ವತಿ ನದಿಗೆ ಈಜಲು ಹೋಗಿ ಈಜು ಬಾರದೇ ಶಿಕಾರಿಪುರದ ಶಂಶಾಕ್ (17) ಎಂಬಾತ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಗಾಮ ಗ್ರಾಮದಲ್ಲಿ ನಡೆದಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿ ಆಗಿದ್ದ ಶಂಶಾಕ್ ಮಧ್ಯಾಹ್ನ ಗಾಮ ಗ್ರಾಮದಲ್ಲಿ ಕುಮದ್ವತಿ ನದಿಗೆ ಸ್ನೇಹಿತರೊಂದಿಗೆ ಈಜಲು ಹೋಗಿದ್ದ. ಆದರೆ ಈಜಲು ಬಾರದೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.