ಕರ್ನಾಟಕ

karnataka

ETV Bharat / videos

ಲಾಕ್​ಡೌನ್ ಫ್ರೀ ಟೈಂನಲ್ಲಿ ರೈತನಾಗಿ‌ ಬದಲಾದ ಐಪಿಎಸ್ ಅಧಿಕಾರಿ - ಡಿಸಿಪಿ ಚೇತನ್​ ಸಿಂಗ್​ ರಾಥೋರ್​ ಕೈತೋಟ

By

Published : Apr 24, 2020, 2:00 PM IST

ಬೆಂಗಳೂರು: ಲಾಕ್​ಡೌನ್​ ನಡುವೆ ಫ್ರೀಯಾಗಿರುವ ಜನರಿಗೆ ಐಪಿಎಸ್​ ಅಧಿಕಾರಿಯೊಬ್ಬರು ಕೃಷಿ ಮಂತ್ರ ಜಪಿಸುವಂತೆ ತಿಳಿ ಹೇಳಿದ್ದಾರೆ. ಲಾಕ್​ಡೌನ್​ ಕರ್ತವ್ಯ ನಿರ್ವಹಣೆ ಜೊತೆಗೆ ತಮಗೆ ಸಿಗುವ ಕೊಂಚ ಸಮಯದಲ್ಲಿ ತಮ್ಮ ಮನೆ ಗಾರ್ಡನ್​ನಲ್ಲಿ ಅವಶ್ಯಕ ತರಕಾರಿಗಳನ್ನು ಬೆಳೆದಿರುವ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್​ ಸಿಂಗ್​ ರಾಥೋರ್​ ಅವರು, ತಮಗೆ ಸಿಗುವ ಅಲ್ಪ ಸಮಯವನ್ನು ವ್ಯರ್ಥ ಮಾಡದೆ ಕೈತೋಟದಲ್ಲಿ ಕೃಷಿ ಕೆಲಸ ಮಾಡಿದ್ದಾರೆ. ಅಲ್ಲದೆ, ಇಂತಹ ಕೆಲಸಗಳ ಮೂಲಕ ಸಮಯದ ಸದುಪಯೋಗ ಮಾಡಿಕೊಳ್ಳಿ ಎಂದು ಜನರಿಗೂ ಸಲಹೆ ನೀಡಿದ್ದಾರೆ ಡಿಸಿಪಿ.

ABOUT THE AUTHOR

...view details