ಪಿಡಬ್ಲ್ಯೂಡಿ ಎಇಇ ವಿರುದ್ಧ ಡಿಸಿಎಂ ಕಾರಜೋಳ ಗರಂ - ಪಿಡಬ್ಲ್ಯೂಡಿ ಎಇಇ ಅಧಿಕಾರಿ ವಿರುದ್ಧ ಡಿಸಿಎಂ ಕಾರಜೋಳ ಗರಂ
ವಿಜಯಪುರ: ಕಾಮಗಾರಿಯ ಯೋಜನಾ ಮಾಹಿತಿ ಇಲ್ಲದೆ ಬಂದ ಪಿಡಬ್ಲ್ಯೂಡಿ ಎಇಇ ಅವರನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತರಾಟೆಗೆ ತೆಗೆದುಕೊಂಡರು. ಚಡಚಣ ತಾಲೂಕಿನ ಹತ್ತಳ್ಳಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಚಾಲನೆಗೆ ಆಗಮಿಸಿದ್ದ ವೇಳೆ ಕಾಮಗಾರಿಯ ಯೋಜನಾ ಮಾಹಿತಿ ಇಲ್ಲದೆ ಬಂದ ಎಇಇ ವಿರುದ್ಧ ಡಿಸಿಎಂ ಗರಂ ಆದರು. ಯೋಜನೆಯ ನೋಟ್ಸ್ ಯಾಕೆ ಮಾಡಿಕೊಂಡು ಬಂದಿಲ್ಲ?. ಕನಿಷ್ಠ ನೋಟ್ಸ್ ಮಾಡಿಕೊಂಡು ಬರುವ ಪರಿಜ್ಞಾನ ಇಲ್ವಾ?, ಎಷ್ಟು ವರ್ಷ ಆಯ್ತು ಸರ್ವಿಸ್ ಮಾಡೋಕೆ ಶುರು ಮಾಡಿ ಎಂದು ಪ್ರಶ್ನಿಸಿದರು.