ಡಿಸಿಎಂ ಆದ ಬಳಿಕ ಮೊದಲ ಬಾರಿ ಮೈಸೂರಿಗೆ ಭೇಟಿ ನೀಡಿದ ಅಶ್ವತ್ಥ್ ನಾರಾಯಣ... ಹೀಗಿತ್ತು ಸ್ವಾಗತ! - Mysore
ಮೈಸೂರು: ಉಪಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣರನ್ನು ಮೈಸೂರು-ಬೆಂಗಳೂರು ರಸ್ತೆ ಟೋಲ್ ಗೇಟ್ ಬಳಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ, ಡಿಸಿಎಂಗೆ ಹಾರ ಹಾಕಲು ಮುಂದಾಗಿದ್ದ ವ್ಯಕ್ತಿ ಒಬ್ಬನನ್ನು ಪೊಲೀಸರು ತಡೆದಾಗ ಅವರ ಮಧ್ಯೆ ಮಾತಿನ ಚಕಮಕಿ ನಡೆಯಿತು.