ದಸರಿಘಟ್ಟದ ಚೌಡೇಶ್ವರಿಗೆ ಡಿಸಿಎಂ ಅಶ್ವತ್ಥ ನಾರಾಯಣ ವಿಶೇಷ ಪೂಜೆ - ಡಿಸಿಎಂ ಅಶ್ವತ್ಥ ನಾರಾಯಣ ವಿಶೇಷ ಪೂಜೆ
ತುಮಕೂರು : ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಇಂದು ತಿಪಟೂರಿನ ದಸರಿಘಟ್ಟ ಗ್ರಾಮದಲ್ಲಿರುವ ಚೌಡೇಶ್ವರಿ ದೇಗುಲಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಕುಟುಂಬದ ಶ್ರೇಯಸ್ಸಿಗಾಗಿ ವಿಶೇಷ ಅರ್ಚನೆಯನ್ನು ಮಾಡಿಸಿದರು. ತಿಪಟೂರು ಬಿಜೆಪಿ ಶಾಸಕ ನಾಗೇಶ್ ಹಾಗೂ ಬಿಜೆಪಿ ಮುಖಂಡರು ಸಾಥ್ ನೀಡಿದರು. ಶ್ರೀ ಆದಿಚುಂಚನಗಿರಿ ಶಾಖಾ ಮಠದ ವತಿಯಿಂದ ಡಿಸಿಎಂ ಅಶ್ವತ್ಥ ನಾರಾಯಣಗೆ ಪೂರ್ಣಕುಂಭ ಸ್ವಾಗತವನ್ನು ಮಾಡಲಾಯಿತು.