ಬೆಣ್ಣೆನಗರಿಯಲ್ಲಿ ರಾಬರ್ಟ್ ಹವಾ: ಜೈ ಶ್ರೀರಾಮ್ ಹಾಡಿಗೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು - ದಾವಣಗೆರೆ
ಬೆಣ್ಣೆನಗರಿ ದಾವಣಗೆರೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಹವಾ ಜೋರಾಗಿದೆ. ನಗರದ ಆಶೋಕ್, ತ್ರಿಶೂಲ್, ತ್ರಿನೇತ್ರ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಮೊದಲ ಶೋ ಆರಂಭಿಸಲಾಗಿತ್ತು. ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಲು ಮೂರು ಚಿತ್ರಮಂದಿರಗಳ ಬಳಿ ಡಿ ಬಾಸ್ ಅಭಿಮಾನಿಗಳು ಜಮಾಯಿಸಿದ್ದರು. ಸಿನಿಮಾದ ಜೈ ಶ್ರೀರಾಮ್ ಹಾಡು ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಚಿತ್ರಮಂದಿರ ಪರದೆ ಬಳಿ ಸಖತ್ ಸ್ಟೆಪ್ ಹಾಕಿ ಸಂಭ್ರಮಿಸಿದರು. ತ್ರಿಶೂಲ್ ಹಾಗೂ ತ್ರಿನೇತ್ರ ಚಿತ್ರಮಂದಿರಗಳಲ್ಲಿ ಮೊದಲ ಶೋ ಬೆಳಗ್ಗೆ 6 ಕ್ಕೆ ಆರಂಭವಾದರೂ, ಅಶೋಕ ಚಿತ್ರಮಂದಿರದಲ್ಲಿ ಮಾತ್ರ 6:30 ಕ್ಕೆ ತಡವಾಗಿ ಶೋ ಆರಂಭ ಮಾಡಿದ್ದರಿಂದ ಚಿತ್ರಮಂದಿರದ ಸಿಬ್ಬಂದಿ ವಿರುದ್ಧ ಅಭಿಮಾನಿಗಳ ಆಕ್ರೋಶ ವ್ಯಕ್ತಪಡಿಸಿದರು.
Last Updated : Mar 11, 2021, 10:00 AM IST