ರೊಟ್ಟಿ ಹೊತ್ತು ಹೊರಟ ದಾವಣಗೆರೆ ಮಂದಿ... ನೆರೆ ಪೀಡಿತರಿಗಾಗಿ ಮರುಗಿತು ಈ ಗ್ರಾಮಸ್ಥರ ಮನ! - ಪ್ರವಾಹ ಪೀಡಿತ ಪ್ರದೇಶ
ಬರೋಬ್ಬರಿ 15 ಸಾವಿರ ರೊಟ್ಟಿ, 3 ಸಾವಿರ ಚಪಾತಿ ತಯಾರಿಸಿಕೊಂಡು ನೇರವಾಗಿ ಸಂತ್ರಸ್ತರಿಗೆ ತಲುಪಿಸಲು ಹೊರಟಿರೋ ಜನ. ಜೊತೆಗೆ ಶೇಂಗಾ ಪುಡಿ, ನಿತ್ಯ ಬಳಕೆ ವಸ್ತುಗಳು, ಚಾಪೆಗಳು, ರಗ್ಗು, ಬೆಡ್ ಶಿಟ್ ಸಂಗ್ರಹಿಸಿ ಬಸ್ಗೆ ತುಂಬುತ್ತಿರೋ ಮಂದಿ. ಈ ದೃಶ್ಯ ಕಂಡು ಬಂದಿದ್ದು ದಾವಣಗೆರೆ ಜಿಲ್ಲೆಯ ಮಾಯಕೊಂಡ ಹೋಬಳಿಯ ಕಂದಗಲ್ಲು ಗ್ರಾಮದಲ್ಲಿ. ಇಲ್ಲಿನ ಗ್ರಾಮಸ್ಥರು ಕರ್ನಾಟಕ ಪ್ರವಾಹ ಸಂತ್ರಸ್ತರಿಗಾಗಿ ಈ ವಸ್ತುಗಳನ್ನು ಬಸ್ ಮೂಲಕ ಕೊಂಡೊಯ್ಯುತ್ತಿದ್ದಾರೆ. ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಂದಗಲ್ಲು ಗ್ರಾಮಸ್ಥರು ಮೂರು ದಿನಗಳ ಕಾಲ ರೊಟ್ಟಿ ಹಾಗೂ ಚಪಾತಿ ತಯಾರಿಸಿ ಅದನ್ನು ಖುದ್ದು ತಾವೇ ನೇರವಾಗಿ ಸಂತ್ರಸ್ತರಿಗೆ ತಲುಪಿಸಲು ಹೊರಟ್ಟಿದ್ದಾರೆ. ಈ ಸಹಾಯದ ನೇತೃತ್ವವನ್ನು ಆನಂದಪ್ಪ ಎಂಬುವವರು ವಹಿಸಿಕೊಂಡು, ಬಸ್ ಮುಖಾಂತರ ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿದರು.
Last Updated : Aug 12, 2019, 7:51 PM IST