ವೀಕ್ಷಿಸಿ: ಬೆಣ್ಣೆನಗರಿಯ ಗರಿಗರಿ ದೋಸೆಗೆ ಮನಸೋಲದವರುಂಟೇ? - Davangere Butter Dosa
ಬೆಣ್ಣೆದೋಸೆ ಅಂದ್ರೆ ತಕ್ಷಣ ನೆನಪಾಗೋದು ದಾವಣಗೆರೆ. ಇಲ್ಲಿನ ಗರಿಗರಿಯಾದ ಬಿಸಿಬಿಸಿ ದೋಸೆಯ ರುಚಿಗೆ ಮನಸೋಲದವರೇ ಇಲ್ಲ. ರಾಜಕಾರಣಿಗಳಿಂದ ಹಿಡಿದು, ಸಿನಿಮಾ ನಟರತನಕ ಎಲ್ಲರಿಗೂ ಬೆಣ್ಣೆದೋಸೆ ಅಂದ್ರೆ ಪಂಚಪ್ರಾಣ. ದಾವಣಗೆರೆಯತ್ತ ಯಾರಾದರೂ ಬಂದ್ರೆ ಬೆಣ್ಣೆದೋಸೆಯ ರುಚಿ ಸವಿಯದೆ ಹೋಗುವುದು ಕಡಿಮೆ. ಆದರೆ, ನಗರದ ಗುಂಡಿ ವೃತ್ತದಲ್ಲಿರುವ ಕೊಟ್ಟೂರೇಶ್ವರ ಹೋಟೆಲ್ನಲ್ಲಿ ಸಿಗೋ ಬೆಣ್ಣೆದೋಸೆ ಮಾತ್ರ ತುಂಬಾ ಸ್ಪೆಷಲ್. ಹಾಗಾಗಿಯೇ, ಇಲ್ಲಿನ ಬೆಣ್ಣೆದೋಸೆ ಮತ್ತು ಖಾಲಿ ದೋಸೆ ಸವಿಯಲು ವಿವಿಧೆಡೆಯಿಂದ ಜನ ಆಗಮಿಸ್ತಾರೆ.