ಬೆಣ್ಣೆ ನಗರಿ ಹೋಟೆಲ್,ಅಂಗಡಿ ಮಾಲೀಕರಿಂದ ಬಂದ್‌ಗೆ ಬೆಂಬಲವಿಲ್ಲ - Karnataka Band opposes Maratha Development Corporation
ದಾವಣಗೆರೆ: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಆದರೆ ಈ ಬಂದ್‌ಗೆ ಬೆಣ್ಣೆ ನಗರಿಯ ಅಂಗಡಿ ಹಾಗೂ ಹೋಟೆಲ್ ಮಾಲೀಕರು ಬೆಂಬಲ ನೀಡಲು ನಿರಾಕರಿಸಿದ್ದಾರೆ. ಕೊರೊನಾದಿಂದ ಈಗಾಗಲೇ ವ್ಯಾಪಾರವಿಲ್ಲದೆ ಹೈರಾಣಾಗಿದ್ದೇವೆ. ಬಂದ್ ಮಾಡಿದ್ರೆ ನಮಗೆ ಆರ್ಥಿಕವಾಗಿ ನಷ್ಟವಾಗುತ್ತದೆ ಎಂದಿದ್ದಾರೆ. ದಾವಣಗೆರೆಯ 28 ಸಂಘಟನೆಗಳು ಈಗಾಗಲೇ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು,ಅಂಗಡಿ ಹಾಗೂ ಹೋಟೆಲ್ ಮಾಲೀಕರು ಮಾತ್ರ ಬೆಂಬಲ ನೀಡುವುದಿಲ್ಲ ಎನ್ನುತ್ತಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ವಿವರವಾದ ಮಾಹಿತಿ ನೀಡಿದ್ದಾರೆ.