ಗಗನಕ್ಕೇರುತ್ತಿದೆ ಈರುಳ್ಳಿ ಬೆಲೆ : ಬೆಳೆದ ರೈತನಿಗೆ ಮಾತ್ರ ಕಣ್ಣೀರು - Davanagere onion news
ಒಂದೇಡೆ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ ಎಂದು ಗ್ರಾಹಕರು ಕೊರಗುತ್ತಿದ್ದರೆ, ಮತ್ತೊಂದೆಡೆ ಬೆಳೆದ ಬೆಳೆಗೆ ಉತ್ತಮ ಧಾರಣೆ ಕೈಗೆ ಸಿಗುತ್ತಿಲ್ಲ ಎಂಬ ಆತಂಕ ಈರುಳ್ಳಿ ಬೆಳೆಗಾರರನ್ನ ಕಾಡುತ್ತಿದೆ. ರೈತರ ಕಣ್ಣಲ್ಲಿ ಈ ಬಾರಿ ಈರುಳ್ಳಿ ನೀರು ತರಿಸುತ್ತಿದೆ. ಬೆಂಗಳೂರು, ಹುಬ್ಬಳ್ಳಿ ಹೊರತುಪಡಿಸಿದರೆ ದಾವಣಗೆರೆಯ ಎಪಿಎಂಸಿ ಮಾರುಕಟ್ಟೆಯೇ ಅತಿ ಹೆಚ್ಚು ಈರುಳ್ಳಿ ವಹಿವಾಟು ನಡೆಯುವ ಕೇಂದ್ರ. ಆದ್ರೆ, ಇಲ್ಲಿಗೆ ಬರುವ ರೈತರದ್ದು ಒಂದೇ ಆತಂಕ. ತಂದ ಈರುಳ್ಳಿ ಬೆಲೆಗೆ ಬೆಲೆ ಸಿಗುತ್ತಾ ಎಂಬುದು. ಪ್ರತಿನಿತ್ಯ 1200 ಟನ್ ಈರುಳ್ಳಿ ಮಾರುಕಟ್ಟೆಗೆ ಬರುತ್ತದೆ. ಅಲ್ಲದೆ ತಮಿಳುನಾಡು, ನೇಪಾಳ, ಬಾಂಗ್ಲಾ ಗಡಿ ಭಾಗದವರೆಗೂ ಇಲ್ಲಿಂದ ಈರುಳ್ಳಿ ರಫ್ತು ಮಾಡಲಾಗುತ್ತದೆ. ಅಂತಹ ಮಾರುಕಟ್ಟೆಗೆ ಈರುಳ್ಳಿ ತರುವ ರೈತರನ್ನ ಕಾಡುತ್ತಿರುವ ಪ್ರಶ್ನೆ ತಂದ ಈರುಳ್ಳಿಗೆ ಸರಿಯಾದ ಬೆಲೆ ಸಿಗುತ್ತಾ ಅಂತಾ....!