ವಿಶ್ವವಿಖ್ಯಾತ ಮೈಸೂರು ದಸರಾ ಮೊದಲ ದಿನದ ಒಂದು ಝಲಕ್ ನಿಮಗಾಗಿ... - ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ
ಮೈಸೂರು: ಭಾನುವಾರ ಬೆಳಿಗ್ಗೆ ಚಾಮುಂಡೇಶ್ವರಿಗೆ ಅಗ್ರ ಪೂಜೆ ಸಲ್ಲಿಸಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾಗೆ ಎಸ್.ಎಲ್.ಭೈರಪ್ಪ ವಿದ್ಯುಕ್ತವಾಗಿ ನೀಡಿದರು. ದಸರಾದ ಆಕರ್ಷಣೆಯಲ್ಲೊಂದಾದ ಅಂಬಾ ವಿಲಾಸ ಅರಮನೆಯಲ್ಲಿ ಜರುಗಿದ ಖಾಸಗಿ ದರ್ಬಾರ್ಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಲನಚಿತ್ರೋತ್ಸವಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಾಹಸ ಕ್ರೀಡೆಗೆ ಶಾಸಕ ಜಿ.ಟಿ.ದೇವೇಗೌಡ, ಆಹಾರ ಮೇಳಕ್ಕೆ ಹಾಗೂ ದಸರಾ ಕುಸ್ತಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ಕೊಟ್ಟರು. ಅಷ್ಟೇ ಅಲ್ಲದೆ, ಪುಸ್ತಕ ಮೇಳ ಹಾಗೂ ಸಂಜೆ ಹಸಿರು ಮಂಟಪದಲ್ಲಿ ದೀಪಾಲಂಕಾರಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮಗಳ ಉದ್ಘಾಟನೆಯ ಮೊದಲ ದಿನದ ಝಲಕ್ ಇಲ್ಲಿದೆ.