ಕರ್ನಾಟಕ

karnataka

ETV Bharat / videos

ಮದವೇರಿದ ದಸರಾ ಗಜಪಡೆ : ಈಶ್ವರ-ಧನಂಜಯನ ನಡುವೆ ಭರ್ಜರಿ ಕಾಳಗ... VIDEO - Mysore district news

By

Published : Sep 9, 2019, 2:53 PM IST

Updated : Sep 9, 2019, 7:04 PM IST

ಮೈಸೂರು: ಮದವೇರಿದ ಗಜಪಡೆ ಹೊಸ ಆನೆ ಈಶ್ವರ ಹಾಗೂ ಧನಂಜಯನ ನಡುವೆ ಫೈಟ್ ನಡೆದಿದೆ. ದಸರಾ ಗಜಪಡೆ ಮೊದಲ ತಂಡದಲ್ಲಿ ಆಗಮಿಸಿ ಆನೆಗಳನ್ನು ಒಂದೆಡೆ ಕಟ್ಟಲಾಗಿದೆ‌. ಮದವೇರಿದ ಎರಡು ಆನೆಗಳು ಸೊಂಡಿಲು ಹಾಗೂ ದಂತದಿಂದ ತಿವಿದಾಡಿಕೊಂಡಿದೆ‌. ಮಾವುತರು ಹಾಗೂ ಕಾವಾಡಿಗಳು ಬೇರೆಡೆ ಇದ್ದ ಸಂದರ್ಭದಲ್ಲಿ ಮದವೇರಿ ರೊಚ್ಚಿಗೆದ್ದ ಇವುಗಳನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಮಾವುತ ಹಾಗೂ ಕಾವಾಡಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕಾಗಮಿಸಿದ ಮಾವುತ ಹಾಗೂ ಕಾವಾಡಿಗಳು ಈಶ್ವರ ಹಾಗೂ ಧನಂಜಯನಿಗೆ ಬುದ್ಧಿ ಹೇಳಿ ಸುಮ್ಮನಿರಿಸಿ, ಇವುಗಳ ಮಧ್ಯ ಹೆಣ್ಣಾನೆ ಕಟ್ಟಲು ನಿರ್ಧರಿಸಿದರು.
Last Updated : Sep 9, 2019, 7:04 PM IST

ABOUT THE AUTHOR

...view details