ರಾಬರ್ಟ್ ರಿಲೀಸ್: ಡಿ ಬಾಸ್ ಕಟೌಟ್ಗೆ ಕ್ಷೀರಾಭಿಷೇಕ - darshan fans celebration
ಹಾವೇರಿ/ಸುರಪುರ : ದರ್ಶನ್ ಅಭಿನಯದ ಬಹು ನಿರೀಕ್ಷಿತ ರಾಬರ್ಟ್ ಚಿತ್ರ ಇಂದು ತೆರೆ ಕಂಡಿದ್ದು, ಹಲವೆಡೆ ಡಿ ಬಾಸ್ ಅಭಿಮಾನಿಗಳು ವಿಭಿನ್ನವಾಗಿ ಸಂಭ್ರಮಾಚರಿಸುತ್ತಿದ್ದಾರೆ. ಹಾವೇರಿ ಚಿತ್ರಮಂದಿರದ ಎದುರು 25 ಅಡಿ ಎತ್ತರದ ದರ್ಶನ್ ಕಟೌಟ್ ಹಾಕಿ ಅದಕ್ಕೆ ಬಲೂನ್ ಮತ್ತು ಹೂವಿನ ಹಾರಗಳಿಂದ ಅಲಂಕರಿಸಿದ್ದರು. ಕೆಲ ಅಭಿಮಾನಿಗಳು ಕಟೌಟ್ ಏರಿ ಕ್ಷೀರಾಭಿಷೇಕ ಮಾಡಿದರು. ಬಳಿಕ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇನ್ನೂ ಸುರಪುರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕೂಡ ಬೃಹತ್ ಗಾತ್ರದ ದರ್ಶನ್ ಅವರ ಕಟೌಟ್ ನಿಲ್ಲಿಸಿ ಅದಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ.