ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಿದ ಡಿಬಾಸ್ ಅಭಿಮಾನಿ - ದರ್ಶನ್ ಅಭಿಮಾನಿ ಸಚ್ಚಿದಾನಂದ
ಮಂಡ್ಯ: ನಟ ದರ್ಶನ್ ಹೆಸರಲ್ಲಿ ಸಾಮಾಜಿಕ ಕಾರ್ಯಕ್ಕೆ ಅಭಿಮಾನಿ ಮುಂದಾಗಿದ್ದು, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಣೆ ಮಾಡಿದ್ದಾರೆ. ಮಂಡ್ಯದ ಇಂಡುವಾಳು ಗ್ರಾಮದ ದರ್ಶನ್ ಅಭಿಮಾನಿ ಸಚ್ಚಿದಾನಂದ ಸಮಾಜಮುಖಿ ಕಾರ್ಯ ಮಾಡುತ್ತಿದ್ದು, ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿಯ 44 ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಮಾಡಿ ಅಭಿನಂದಿಸಿದ್ದಾರೆ.