ಹೆಚ್ಡಿಕೆ ಜನ್ಮದಿನ ಹಿನ್ನೆಲೆ ಗಣಪತಿಗೆ ವಿಶೇಷ ಪೂಜೆ, 101 ತೆಂಗಿನಕಾಯಿ ಒಡೆದ ಕಾರ್ಯಕರ್ತರು - pooja to ganapa at darawada
ಧಾರವಾಡ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜನ್ಮ ದಿನದ ಹಿನ್ನೆಲೆ, ಧಾರವಾಡದ ಜೆಡಿಎಸ್ ಕಾರ್ಯಕರ್ತರು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ 101 ತೆಂಗಿನಕಾಯಿ ಒಡೆದರು. ಕರ್ನಾಟಕ ಕಲಾ ಮಹಾವಿದ್ಯಾಲಯದ ಮುಂಭಾಗದಲ್ಲಿರುವ ಕೆಸಿಡಿ ಗಣಪತಿ ದೇವಸ್ಥಾನದ ಮುಂದೆ ಜೆಡಿಎಸ್ ಕಾರ್ಯಕರ್ತರು ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ 101 ತೆಂಗಿನಕಾಯಿಗಳನ್ನು ಒಡೆಯಲಾಯಿತು.