ದಸರಾ ಗಜಪಡೆ: ಮಾವುತ, ಕಾವಾಡಿಗಳ ಮಕ್ಕಳಿಗೆ ಟೆಂಟ್ ಶಾಲೆಯಲ್ಲಿ ನೃತ್ಯ ತರಬೇತಿ - mysore palace ground
ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ಮಾವುತ ಹಾಗೂ ಕಾವಾಡಿಗಳ ಮಕ್ಕಳಿಗಾಗಿ ಇರುವ ಟೆಂಟ್ ಶಾಲೆಯಲ್ಲಿ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಟಕ, ಪರಿಸರ ಸಂರಕ್ಷಣೆ ಹೀಗೆ ಇತ್ಯಾದಿ ಮೌಲ್ಯಯುತ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತಿದೆ. ಸಂಗೀತ ಹಾಗೂ ನಾಟಕವನ್ನು ಡಿ. ನಾಗೇಂದ್ರಕುಮಾರ್ ಮೇಷ್ಟ್ರು ಹೇಳಿಕೊಡುತ್ತಿದ್ದಾರೆ. ಆಸಕ್ತಿಯಿಂದ ಕಲಿಯುವ ಪುಟಾಣಿಗಳು, ನಗರವಾಸಿ ಮಕ್ಕಳಿಗಿಂತ ನಾವೇನು ಕಡಿಮೆಯಲ್ಲ ಎಂದು ನೃತ್ಯ ಪ್ರದರ್ಶಿಸುತ್ತಿದ್ದಾರೆ.