ಕಣ್ಮನ ಸೆಳೆಯುತ್ತಿದೆ ದಮ್ಮೂರು ಫಾಲ್ಸ್ - ಇಲಕಲ್ಲ ತಾಲೂಕಿನ ದಮ್ಮೂರ ಫಾಲ್ಸ್
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಳಕಲ್ ತಾಲೂಕಿನ ದಮ್ಮೂರ ಗ್ರಾಮದ ದಿಡಗಿನ ಬಸವೇಶ್ವರ ದೇವಾಲಯ ಬಳಿ ಇರುವ ಫಾಲ್ಸ್ ಕಣ್ಮನ ಸೆಳೆಯುತ್ತಿದೆ. ಬೆಟ್ಟದ ಮೇಲಿಂದ ಮೈದುಂಬಿ ಹರಿಯುತ್ತಿರುವ ಫಾಲ್ಸ್ ನೋಡಲು ಎರಡು ಕಣ್ಣು ಸಾಲುವುದಿಲ್ಲ. ಬೆಟ್ಟದಲ್ಲಿ ಮರ ಇದ್ದು, ಅದರ ಪಕ್ಕದಲ್ಲೇ ದಿಡಗಿನ ಬಸವೇಶ್ವರ ದೇವಸ್ಥಾನವಿದೆ. ಭಾರೀ ಪ್ರಮಾಣದಲ್ಲಿ ಮಳೆಯಾದಾಗ ಹೀಗೆ ನೀರು ದುಮ್ಮಿಕ್ಕಿ ಬರುತ್ತದೆ. ಹೀಗೆ ಹರಿದು ಹೋದ ನೀರು ಕೆಳಗೆ ಕರೆಯಲ್ಲಿ ಸಂಗ್ರಹವಾಗುತ್ತದೆ.